ಇದು ಬಹುಷ ಎಂ. ಜಿ. ಎಮ್ ಕಾಲೇಜಿನ ಚರಿತ್ರೆಯಲ್ಲಿಯೇ ಒಂದು ಚಿರಸ್ಥಾಯಿಯಾಗಿ ನೆನಪಿನಲ್ಲಿರುವಂತಹ ಅನುಭವ. ನಮ್ಮ ಸುರೇಂದ್ರನಾಥ ಶೆಟ್ಟರು, ಕಾಲೇಜಿನ ಪ್ರಾಂಶುಪಾಲರಾಗಿ ಎಲ್ಲರ ಮೆಚ್ಚಿಗೆಗೆ ಪಾತ್ರರಾದ ಎಂ. ಎಲ್ ಸಾಮಗರು, ಹಾಗೇ, ಪ್ರೊ. ಶ್ರೀಶ ಆಚಾರ್ಯ ಹಾಗೂ ಈಗಿನ ಪ್ರಾಂಶುಪಾಲರಾಗಿರುವ ಕಾರಂತರು, ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಅಕಡೆಮಿಯ ಕಾರ್ಯದರ್ಶಿಯಾಗಿರುವ ಸಿ. ಎ. ವರದರಾಯ ಪೈ ಹಾಗೂ ದೀಪಾಲಿ ಮೇಡಮ್ ಹಾಗೂ ಇತರರ ಅವಿರತ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಒಂದೆರಡು ಸಾವಿರಕ್ಕಿಂತಲೂ ಹೆಚ್ಚು ಹಳೆವಿದ್ಯಾರ್ಥಿಗಳು ಬಂದು ಸೇರುವುದೆಂದರೆ, ಇದು ಸಣ್ಣ ವಿಷಯವಲ್ಲ. ಇವರೆಲ್ಲರ ಪ್ರಯತ್ನ ಸುಮಾರು ಐದು ಸಾವಿರ ವಿದ್ಯಾರ್ಥಿಗಳಿಗಿಂತಲೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ತಲಪಿದೆ.
ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ, ಅಲ್ಲದೆ ನಿವೃತ್ತಿ ಹೊಂದಿದ ಅದ್ಯಾಪಕರು ಅಥವಾ ಅವರು ಈಗ ಇಲ್ಲದಿದ್ದರೆ, ಅವರ ಕುಟುಂಬದ ನೂರಾರು ಅದ್ಯಾಪಕರಿಗೆ ಈ ಅಮಂತ್ರಣ ತಲಪಿದೆ. ಕಾಲೇಜಿನ ವಿಶ್ಚಸ್ಥ ಮಂಡಳಿಯ ಶ್ರೀ ಸತೀಶ್ ಪೈ ಅವರ ನಾಯಕತ್ವ ಈ ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣ. ಅಕಡೆಮಿ ಹಾಗೂ ಎಂ. ಜಿ. ಎಂ ಕಾಲೇಜು ಹಲವಾರು ನೂತನ ಅವಿಷ್ಕಾರಗಳಿಗೆ ನಾಂದಿ ಹಾಡಿದೆ. ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ವಿಶ್ವನಾಥ ಪೈ ಈ ಎಲ್ಲಾ ಕಾರ್ಯಕ್ರಮಗಳನ್ನು ಸಂಯೋಜಿಸುವಲ್ಲಿ ಮುತುವರ್ಜಿ ವಹಿಸಿದ್ದರು.
ಈ ಕೆಳಗೆ ಅಂದು ಬೆಳಿಗ್ಗೆ ಜರಗಿದ ಕಾರ್ಯಕ್ರಮಗಳ ಪಕ್ಷಿನೋಟ ವೀಕ್ಷಿಸಬಹುದು.
ಈ ಕಾರ್ಯಕ್ರಮವು ತಾರೀಕು 23-12-2023ರಂದು ಕಾಲೇಜಿನಲ್ಲಿ ಜರಗಿತು. ಕಾರ್ಯಕ್ರಗಳು ಬೆಳಿಗ್ಗೆ 8.30ಕ್ಕೆ ಕಾಲೇಜಿನ ಆವರಣ ಹಾಗೂ ಮುದ್ದಣ್ಣ ಮಂಟಪದಲ್ಲಿ ಆರಂಭಗೊಂಡು ಮುಂದುವರಿಯಿತು. ಅಂದು ಬೆಳಗ್ಗೆ 9.30 ಗಂಟೆಗೆ ಸರಿಯಾಗಿ ಕಾಲೇಜಿನ ಆಡಳಿತ ಸೌಧದಲ್ಲಿರುವ ಮಾಧವ ರಕ್ಷಾದಲ್ಲಿರುವ ಡಾ. ಟಿ. ಎಂ. ಎ. ಪೈ ಅವರ ಪುತ್ತಳಿಗೆ ಗೌರವಾರ್ಪಣೆ ಮಾಡುವುದರೊಂದಿಗೆ ಆರಂಭವಾಗಿ, ಅತಿಥಿ ಅಭ್ಯಾಗತರನ್ನು ಮೆರವಣಿಗೆ ಮುಖಾಂತರ ಗೀತಾಂಜಲಿ ಸಭಾ ಭವನಕ್ಕೆ ಸಾಗಿ, ಅಲ್ಲಿ ಬೆಳಿಗ್ಗೆ ಗಂಟೆ 9.45ಕ್ಕೆ ಸರಿಯಾಗಿ ಹಳೆ ವಿದ್ಯಾರ್ಥಿಗಳ ಕಾಲೇಜಿನ ಬದುಕನ್ನು ನೆನಪಿಸುವ ಪೋಟೋ ಪ್ರದರ್ಶನ ಉದ್ಘಟನಾ ಕಾರ್ಯಕ್ರಮ ಜರಗಿತು. ಅಂದು ಬೆಳಿಗ್ಗೆ ಮಾಧವ ರಕ್ಷಾ ಆಡಳಿತ ಸೌಧದ ಮುಂಭಾಗದಲ್ಲಿರುವ ಡಾ. ಟಿ. ಎಂ. ಎ. ಪೈ ಅವರ ಪುತ್ತಳಿಗೆ ನಿವೃತ್ತ ಪ್ರಾಂಶುಪಾಲ ಪ್ರೊ. ಶ್ರೀಶ ಆಚಾರ್ಯ ಪುಷ್ಪಾರ್ಚಜೆ ಮಾಡುವ ಮೂಲಕ ಶನಿವಾರ ಬೆಳಿಗ್ಗೆ ಚಾಲನೆ ನೀಡಿದರು. ಬಳಿಕ ಗೀತಾಂಜಲಿ ಸಭಾಭವನದಲ್ಲಿ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಂದರ್ಭ ನೆನಪಿಸುವ ಪೋಟೋ ಗ್ಯಾಲರಿ ಪ್ರದರ್ಶನ ಉದ್ಘಾಟಿಸಲಾಯಿತು.
ಅಮೃತ ಸಂಗಮದಲ್ಲಿ ಮುದ್ದಣ ವೇದಿಕೆಯಲ್ಲಿ ಬೆಳಗ್ಗಿನ ಪಾವನಾ ಆಚಾರ್ಯ ವೀಣಾ ವಾದನ ಎಷ್ಟು ಸೊಗಸಾಗಿ ಮೂಡಿ ಬಂದಿದೆ ಅಂದರೆ ಇಡಿ ಕಾರ್ಯಕ್ರಮಕ್ಕೆ ಉತ್ತಮ ಚಾಲನೆ ನೀಡಿದೆ ಮಾತ್ರವಲ್ಲ ನಮ್ಮ ಉಡುಪಿ ವಾಹಿನಿ ನೇರ ಪ್ರಸಾರದಲ್ಲಿ ಕೂಡಾ ಹೊಸ ಮೆರುಗು ನೀಡಿದೆ..ಅದೆಷ್ಟೋ ವೀಕ್ಷಕರು ಇದನ್ನು ಕೇಳಿ ನೇೂಡಿ ಪ್ರಶಂಶಿಸಿದ್ದಾರೆ. ಇದನ್ನು ಎಲ್ಲಾ ಪತ್ರಿಕೆ ಮಾಧ್ಯಮದವರು ಗುರುತಿಸಿ ಪ್ರಶಂಸಿದ್ದಾರೆ.
ನಂತರ 10 ಗಂಟೆಗೆ ಮುದ್ದಣ ಮಂಟಪದಲ್ಲಿ ಹಳೆ ವಿದ್ಯಾರ್ಥಿಗಳ "ಅಮೃತ ಸಂಗಮ" ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ಜ್ಞಾನ ದೀಪ ಪ್ರಜ್ವಲನೆ ಕಾರ್ಯಕ್ರಮದ ಮುಖಾಂತರ ಜರಗಿತು. ಇದನ್ನು ಎಂ. ಜಿ. ಎಂ ಕಾಲೇಜಿನ ವಿವೃತ್ತ ಪ್ರಾಚಾರ್ಯರು ಹಾಗೂ ಕಾಲೇಜಿನ ಪ್ರಥಮ ತಂಡದ ವಿದ್ಯಾರ್ಥಿಗಳು ನಡೆಸಿ ಕೊಟ್ಟರು.
ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಆವರಣದಲ್ಲಿ ಹಳೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಅಟೋಟಗಳ ಪ್ರತಿಭಾ ವೈಭವಗಳ ಅನಾವರಣ ಜರಗಿತು. ಈ ಕಾರ್ಯಕ್ರಮ ರವೀಂದ್ರ ಮಂಟಪ ಹಾಗೂ ಕಾಲೇಜಿನ ಆವರಣದಲ್ಲಿ ಜರಗಿತು.
ಈ ಕೆಳಗೆ ಅಂದು ಮದ್ಯಾಹ್ನದ ನಂತರ ಜರಗಿದ ಕಾರ್ಯಕ್ರಮಗಳ ಪಕ್ಷಿನೋಟ ವೀಕ್ಷಿಸಬಹುದು.
ಬೆಳಿಗ್ಗೆ 8.30ಕ್ಕೆ ಆರಂಭವಾದ ಉಪಹಾರ ಸುಮಾರು 10 ಗಂಟೆಯ ವರೆಗೆ ಮುಂದುವರಿಯಿತು. ನಂತರ ವಿಶೇಷ ಭೋಜನ 1 ಗಂಟೆಯಿಂದ 3 ಗಂಟೆಯ ವರೆಗೆ ಮುಂದುವರಿಯಿತು. ಅಲ್ಲದೆ 2.30 ಗಂಟೆಗೆ ಅಮೃತ ಸಂಗಮ ಕಾಲೇಜಿನ ಮುದ್ದಣ ಮಂಟಪದಲ್ಲಿ ಪ್ರಾರಂಭವಾಯಿತು. ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಎಂ. ಎಲ್ ಸಾಮಗರು ಕಾರ್ಯಕ್ರಮದ ಸಮಗ್ರ ಚಿತ್ರಣ ನೀಡುವುದರ ಜತೆಗೆ ವೇದಿಕೆಯಲ್ಲಿ ಇದ್ದವರಿಗೆ ಹಾಗೂ ನೆರೆದ ಎಲ್ಲಾಅದ್ಯಾಪಕ, ಅದ್ಯಾಪಕೇತರ ಬಂಧುಗಳಿಗೆ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷರಾದ ಪ್ರೊ. ಶ್ರೀಶ ಆಚಾರ್ಯ, ಕಾಲೇಜಿನ ವಿಶ್ವಸ್ಥ ಮಂಡಲಿಯ ಅದ್ಯಕ್ಷರಾದ ಶ್ರೀ ಟಿ. ಸತೀಶ್ ಪೈ, ಮಣಿಪಾಲ ಅಕಾಡೆಮಿ ಆಪ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಸಿ. ಎ ವರದರಾಯ ಪ್ಯೆ, ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯಾದೀಶರಾಗಿರುವ ಹಾಗೂ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿಯಾಗಿರುವು ಶ್ರೀ ಸಂಜಯ ಹೆಗ್ಡೆ, ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಮಾಹೆ, ಮಣಿಪಾಲ್ ಚೀಪ್ ಒಪರೇಟಿಂಗ ಆಪೀಸರ್ ಆಗಿರುವ ಡಾ. ಆನಂದ ವೇಣುಗೋಪಾಲ್, ಕಾಲೇಜಿನ ಬಿ.ಕಮ್ ತರಗತಿಯ ಹೆಮ್ಮೆಯ ವಿದ್ಯಾರ್ಥಯಾದ, ಪ್ರಕೃತ ಜಮ್ಮು ಹಾಗೂ ಕಾಶ್ಮೀರದ ಪವರ್ ಡಿಪಾರ್ಟಮೆಂಟಿನ ಮುಖ್ಯ ಕಾರ್ಯದರ್ಶಿಯಾಗಿರುವ ಎಚ್. ರಾಜೇಶ್ ಪ್ರಸಾದ್, ಮಾಹೆ, ಮಣಿಪಾಲ ಇದರ ಉಪಕುಲಪತಿಯಾಗಿರುವ ಲೆ. ಜ ಎಮ್ ಡಿ ವೆಂಕಟೇಶ್,ಕಾಲೇಜಿನ ಪ್ರಾಂಶುಪಾಲರಾಗಿರುವ. ಲಕ್ಷ್ಮಿನಾರಾಯಣ ಕಾರಂತ, ಪಿ ಯು. ಕಾಲೇಜಿನ ಪ್ರಾಂಶುಪಾಲರಾಗಿರುವ ಶ್ರೀಮತಿ ಮಾಲತಿ ದೇವಿ, ಸಂಧ್ಯಾಕಾಲೇಜಿನ ಪ್ರಾಂಶುಪಾಲರಾಗಿರು ಡಾ ದೇವಿದಾಸ ನಾಯಕ್ ಸಭೆಯನ್ನುದ್ದೇಶಿಸಿ ಔಚಿತ್ಯಪೂರ್ಣವಾಗಿ ಮಾತನಾಡಿದರು. ಎಂ. ಜಿ. ಎಂ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಡಾ ವಿಶ್ವನಾಥ ಪೈ, ಖಜಾಂಚಿ ದೀಪಾಲಿ, ಎಂ. ಜಿ. ಎಂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರೊ. ಸುರೇಂದ್ರನಾಥ ಶೆಟ್ಟಿ ಹಾಗೂ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಪ್ರಾಂಶುಪಾಲರು ವೇದಿಕೆಯನ್ನು ಅಲಂಕರಿಸಿದ್ಹರು. ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಡಾ. ವಿಜಯೇಂದ್ರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿ ಕೊಟ್ಟರು.
ಕಾಲೇಜು ಯಾವತ್ತು ಮೌಲ್ಲಗಳಿಗೆ ಒತ್ತುಕೊಡುತ್ತಾ ಬಂದಿದೆ. ಕಾಲೇಜಿನಲ್ಲಿ ಇದುವರೆಗೆ ಸೇವೆ ಸಲ್ಲಿಸಿ ನಿವೃತ್ತರಾದ ಎಲ್ಲಾ ಪ್ರಾಂಶುಪಾಲರು, ಅದ್ಯಾಪಕರು, ಅದ್ಯಾಪಕೇತರ ಬಂಧುಗಳು, ನಿವೃತ್ತಿ ಹೊಂದಿದ ಅದ್ಯಾಪಕರು ಇಲ್ಲದಿದಲ್ಲಿ ಅವರ ಕುಟುಂಬ ಸದಸ್ಯರಿಗೆ - ಹೀಗೆ ಸಂಭಂಧಿಸಿದ ಎಲ್ಲಾ ವ್ಯಕ್ತಿಗಳಿಗೆ ವೇದಿಕೆಯಲ್ಲಿ ಫಲ ಪುಷ್ಪ, ಶಾಲು ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ ಮನರಂಜನಾ ಕಾರ್ಯಕ್ರಮ ಜರಗಿತು.
No comments:
Post a Comment