Friday, June 20, 2025

ಪ್ರೊ. ಕು. ಶಿ. ಹರಿದಾಸ ಭಟ್ಟ ಜಾನಪದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

 ತಾರೀಕು 21-06-2025ರಂದು, ಡಾ. ಎನ್.‌ ಟಿ. ಭಟ್ಟರಿಗೆ ಮೊದಲೇ ತಳಿಸಿದ್ದಂತೆ, ಅವರನ್ನು ಎಂ. ಜಿ. ಎಂ ಕಾಲೇಜಿನ ಟಿ. ಮೋಹನದಾಸ್‌ ಪೈ ಕೌಶಲ ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಜರಗಿದ ಪ್ರೊ. ಕು. ಶಿ. ಹರಿದಾಸ ಭಟ್ಟ ಜಾನಪದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಸುಮಾರು 2.30 ರ ಸಮಯದಲ್ಲಿ ಅವರ ಮನೆಗೆ ಹೋಗಿ, ಅಲ್ಲಿಂದ  ಕಾಲೇಜಿಗೆ ಹೋಗಿದ್ದೆ. ಅಲ್ಲಿ ಕು. ಶಿ ಹರಿದಾಸ ಭಟ್ಟರ ಮಗಳು ಆಶಾ ಮತ್ತು ಅವರ ಅಳಿಯ ಶ್ರೀ ಅಶೋಕ ಕುತ್ಯಾರ್‌ ಪ್ರಾಯೋಜಿತ ಪ್ರೊ. ಕು. ಶಿ. ಹರಿದಾಸ ಭಟ್ಟ ಜಾನಪದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೈಸೂರಿನ ಡಾ. ಡಿ. ಕೆ. ರಾಜೇಂದ್ರ (2024) ಹಾಗೂ ಡಾ. ವಿಜಯಶ್ರೀ ಸಬರದ (2025) ನ್ನು ಪ್ರಧಾನ ಮಾಡಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಮಾಹೆ ಸಹಕುಲಾಧಿಪತಿ ಡಾ. ಎಚ್‌ ಎಸ್‌ ಬಲ್ಲಾಳ್‌, ಮ್ಯೆಸೂರು ವಿ ವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ. ಲೋಲಾಕ್ಷಿ, ವಿಶ್ರಾಂತ ಕುಲಪತಿ ಡಾ. ಬಿ ಎ. ವಿವೇಕ ರೈ, ಮ್ಯೆಸೂರಿನ ಡಾ. ಡಿ ಕೆ ರಾಜೇಂದ್ರ ಹಾಗೂ ಬೆಂಗಳೂರಿನ ಡಾ ವಿಜಯಶ್ರೀ ಸಬರದ ಅಬಿಪ್ರಾಯ ಹಂಚಿಕೊಂಡರು. ಕಾಲೇಜಿನ ಗಾಂಧಿ ಆದ್ಯಯನ ಕೇಂದ್ರದ ಸಂಶೋಧಕರಾಗಿರುವ ನನಗೆ ಹೊಸದಾಗಿ ಆರಂಭವಾದ  ಎಂ. ಜಿ. ಎಂ ಕಾಲೇಜಿನ ಟಿ. ಮೋಹನದಾಸ್‌ ಪೈ ಕೌಶಲ ಅಭಿವೃದ್ಧಿ ಕೇಂದ್ರದ ಬಗೆಗೆ ಸಂಪೂರ್ಣ ಮಾಹಿತಿ ನೀಡಿದರು. 














No comments:

ಅಲೆವೂರು ಎಜುಕೇಶನ್ ಸೊಸೈಟಿ: ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಾನು

28-09-2025 ರಂದು ಶಾಲೆಯಲ್ಲಿ ಜರಗಿದ ಅಲೆವೂರು ಎಜ್ಯುಕೇಶನ್‌ ಸೊಸೈಟಿಯ ಸರ್ವ ಸಾಧಾರಣ ಸಭೆಯಲ್ಲಿ ನಾನು ಖಜಾಂಚಿಯ ನೆಲೆಯಲ್ಲಿ ಭಾಗವಹಿಸಿದ್ದೆ. ಅದರ ವಿವರವಾದ  ವರದಿಯನ್ನು...