Sunday, June 15, 2025

ಪ್ರೊ. ಶ್ರೀನಿವಾಸ ಉಪಾಧ್ಯಾಯರಿಗೆ ಕಡಿಯಾಳಿ ಶ್ರೀ ಮಹಿಷಮರ್ಧಿನೀ ದೇವಸ್ಥಾನದ ಶರ್ವಾಣಿ ಮಂಟಪದಲ್ಲಿ ಶ್ರದ್ಧಾಂಜಲಿ ಸಭೆ

 ಎಂ. ಜಿ. ಎಂ ಕಾಲೇಜಿನಲ್ಲಿ ಸುಮಾರು ಮೂವತ್ತಮೂರು ವರ್ಷಗಳಿಗಿಂತಲೂ ಮಿಕ್ಕಿ ಸೇವೆ ಸಲ್ಲಿಸಿದ ಪ್ರೊ. ಶ್ರೀನಿವಾಸ ಉಪಾಧ್ಯಾಯರು ತಾರೀಕು 03-06-2025ರಂದು ದೈವಾಧೀನರಾದ ಕುರಿತು ತಾರೀಕು 16-06-2025ರಂದು ಕಡಿಯಾಳಿ ಶ್ರೀ ಮಹಿಷಮರ್ಧಿನೀ ದೇವಸ್ಥಾನದ ಶರ್ವಾಣಿ ಮಂಟಪದಲ್ಲಿ ಶ್ರದ್ಧಾಂಜಲಿ ಸಭೆ ಜರಗಿತು. ಆ ಸಭೆಯಲ್ಲಿ ಎಮ್.‌ ಜಿ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತ ಮಯ್ಯ, ಉಪ ಪ್ರಾಂಶುಪಾಲರಾದ ಡಾ. ವಿಶ್ವನಾಥ ಪ್ಯೆ, ಉಪಾಧ್ಯಾಯರ ನಿಕಟವರ್ತಿಗಳಾಗಿದ್ದ ಪ್ರೊ. ದಯಾನಂದ ಶೆಟ್ಟಿ, ಪ್ರೊ. ಆನಂದ ಭಟ್‌, ಶ್ರೀ ಶರ್ಮ, ಶ್ರೀ ನಾಗರಾಜ ತಂತ್ರಿ, ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲರಾದ ಪ್ರೊ. ಕಾರಂತ್‌, ಅವರ ನೆಚ್ಚಿನ ವಿದ್ಯಾರ್ಥಿಗಳಾದ ಅಕಡಮಿ ಆಪ್‌ ಜನರಲ್‌ ಎಜ್ಯುಕೇಶನ್‌, ಇದರ ಕಾರ್ಯದರ್ಶಿಗಳಾದ ಸಿ. ಎ. ವರದರಾಯ ಪೈ, ಮಣಿಪಾಲದ ಪ್ರಸಿದ್ಧ ಲೆಕ್ಕ ಪರಿಶೋಧಕರಾದ ಸಿ. ಎ. ಮುರಳೀಧರ ಕಿಣಿ,  ಅವರ ಜತೆ ಕೆಲಸ ಮಾಡಿದ್ದ ಡಾ. ಸುರೇಶರಮಣ ಮಯ್ಯ, ಪ್ರೊ ಎಂ. ಎಲ್‌ ಸಾಮಗ ಹಾಗೂ ಇತರರು ಅವರ ಗುಣಗಾನ ಮಾಡಿದರು. ಪರಮಾತ್ಮನು ಅವರಿಗೆ ಸದ್ಗತಿ ಪ್ರಾಪ್ತಿ ಅನುಗ್ರಹಿಸಲಿ ಹಾಗೂ ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ ಎಂದು ಕುಂಜಿತ್ತಾಯ ಶ್ರೀ ರಾಘವೇಂದ್ರ ಉಪಾಧ್ಯಾಯರು ಪ್ರಾರ್ಥಿಸಿದರು. ಎಂ. ಜಿ. ಎಂ ಕಾಲೇಜಿನಲ್ಲಿ ಅವರೊಂದಿಗೆ ಕಾರ್ಯ ನಿರ್ವಹಿಸಿದ್ದ ಪ್ರೊ. ಕುಸುಮ ಕಾಮತ್‌, ಪ್ರೊ. ಎಸ್.‌ ಆರ್‌ ಅರುಣ ಕುಮಾರ್‌, ಆಪೀಸಿನಲ್ಲಿ ಕಾರ್ಯ ನಿರ್ವಹಿಸಿದ್ದ ಶ್ರೀ ನರಸಿಂಹ ಮೂರ್ತಿ, ಊಪನ್ಯಾಸಕರಾಗಿದ್ದ ಪೊ. ಭಾಸ್ಕರ ಆಚಾರ್‌, ಲೆಕ್ಕದ ಉಪನ್ಯಾಸಕರಾದ ಪ್ರೊ. ದೇವದಾಸ ರಾವ್‌, ಫ್ರೊ ರಾಜಮೂರ್ತಿ, ಪ್ರೊ ಜಯರಾಮ, ಶ್ರೀಮತಿ ಶ್ರೀಪರ್ಣ, ಶ್ರೀಮತಿ ವಿಲಾಸಿನಿ, ಮಣಿಪಾಲದ ಶ್ರೀ ಬಿಜಿಕೆ ಮಯ್ಯ, ಉಪಾಧ್ಯಾಯರ ಧರ್ಮಪತ್ನಿ ಶ್ರೀಮತಿ ಶೋಭಾ ಉಪಾಧ್ಯಾಯ, ಶ್ರೀಮತಿ ಕುಸುಮ, ಡಾ. ಶ್ರೀಮತಿ ಮಯ್ಯ, ಸಮಗ್ರ ಕಾರ್ಯಕ್ರಮವನ್ನು ಸಂಯೋಜಿಸಿದ ಸಿ ಎ. ಪ್ರಮೋದ್‌ ಬಲ್ಲಾಳ್‌ ಹಾಗೂ ಹಲವಾರು ಬಂಧು ಮಿತ್ರರು ಉಪಸ್ಥಿತರಿದ್ದರು. ಮಿತ್ತಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.  

ವಿಡಿಯೋ ವೀಕ್ಷಿಸಲು ಈ ಕೆಳಗೆ ಕ್ಲಿಕ್ ಮಾಡಿ
























No comments:

ಪ್ರೊ. ಕು. ಶಿ. ಹರಿದಾಸ ಭಟ್ಟ ಜಾನಪದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

  ತಾರೀಕು 21-06-2025ರಂದು, ಡಾ. ಎನ್.‌ ಟಿ. ಭಟ್ಟರಿಗೆ ಮೊದಲೇ ತಳಿಸಿದ್ದಂತೆ, ಅವರನ್ನು ಎಂ. ಜಿ. ಎಂ ಕಾಲೇಜಿನ ಟಿ. ಮೋಹನದಾಸ್‌ ಪೈ ಕೌಶಲ ಅಭಿವೃದ್ಧಿ ಕೇಂದ್ರದ ಸಭಾಂಗಣ...