Wednesday, October 1, 2025

ಅಲೆವೂರು ಎಜುಕೇಶನ್ ಸೊಸೈಟಿ: ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಾನು

28-09-2025 ರಂದು ಶಾಲೆಯಲ್ಲಿ ಜರಗಿದ ಅಲೆವೂರು ಎಜ್ಯುಕೇಶನ್‌ ಸೊಸೈಟಿಯ ಸರ್ವ ಸಾಧಾರಣ ಸಭೆಯಲ್ಲಿ ನಾನು ಖಜಾಂಚಿಯ ನೆಲೆಯಲ್ಲಿ ಭಾಗವಹಿಸಿದ್ದೆ. ಅದರ ವಿವರವಾದ  ವರದಿಯನ್ನು ಈ ಕೆಳಗೆ ಪ್ರಸ್ತಾಪಿಸಿದ್ದೇನೆ 


ಕಾರ್ಯಕ್ರಮದ ಆರಂಭವು ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಎ. ಪ್ರಶಾಂತ ಆಚಾರ್ಯ, ಕಾರ್ಯದರ್ಶಿ, ಅಲೆವೂರು ಎಜುಕೇಶನ್‌ ಸೊಸ್ಯೆಟಿ ಅವರು ಶ್ರೀ ಎ. ಪಿ. ಕೊಡಂಚ, ಸದಸ್ಯರು, ಅಲೆವೂರು ಎಜುಕೇಶನ್‌ ಸೊಸೈಟ ಇವರನ್ನು ಎಲ್ಲರಿಗೂ ಸ್ವಾಗತ ಕೋರುವಂತೆ ಕೇಳಿಕೊಂಡರು. ಶ್ರೀ ಕೊಡಂಚರು ಸ್ವಾಗತ ಕೋರುತ್ತಾ, ಅಲೆವೂರು ಶಾಲೆ ನಡೆದುಬಂದ ಹಾದಿಯನ್ನು ವಿವರಿಸಿದರು. ಅಲೆವೂರು ಶಾಲೆ ಪೆಬ್ರವರಿ 7, 1964ರಲ್ಲಿ ಆರಂಭವಾಗಿ, ಆದ ಇದರ ಸ್ಥಾಪಕ ಸದಸ್ಯರಲ್ಲಿ ಈಗ ಇರುವವರು ಮಣಿಪಾಲದ ಮಾಹೆಯ ಚಾನ್ಸಲರ್‌ ಆಗಿರುವ ಶ್ರೀ ರಾಮದಾಸ ಪೈ ಮಾತ್ರ. ಈಗ ಅವರಿಗೆ 90 ವರ್ಷ ಆಗಿದೆ. ಅವರು ಇಲ್ಲಿ ಪಕ್ಕದಲಿ ಮಣಿಪಾಲದ ಕಸ್ತುರ್ಭಾ ಕಾಲೇಜಿನವರು ನಡೆಸುವ ಪ್ರಾಥಮಿಕ ಆರೋಗ್ಯ ಕೇಂದ್ರದ ಮೆಡಿಕಲ್‌ ಡೈರಕ್ಟರ್‌ ಆಗಿದ್ದರು. 1984ನೇ ಇಸವಿಯಲ್ಲಿ ಈ ಪ್ರೌಡಶಾಲೆ ಒಳ್ಳೆ ಸ್ಥಿತಿಯಲ್ಲಿದ್ದಾಗ ಕರ್ನಾಟಕ ಘನ ಸರ್ಕಾರದಿಂದ ಪದವಿ ಪೂರ್ವ ಕಾಲೇಜು ಪ್ರಾರಂಭ ಮಾಡಲಿಕ್ಕೆ ಅನುಮತಿ ಕೂಡ ಬಂದಿತ್ತು.  ಆದರೆ ಕಾರಣಾಂತರದಿಂದ ಪದವಿ ಪೂರ್ವ ಕಾಲೇಜು ಆರಂಬಿಸಲಿಲ್ಲ. ಆದ್ದರಿಂದ ಅವರೆಲ್ಲ ತಮ್ಮ ಪದವಿ ಪೂರ್ವ ವಿದ್ಯಾರ್ಜನೆಗಾಗಿ ಪೂರ್ಣಪ್ರಜ್ಞ ಕಾಲೇಜಿಗೆ ಹೋಗಬೇಕಾಯಿತು.


ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಒಂದು ಸವಾಲು.  ಪ್ರಶಾಂತ ಆಚಾರ್ಯರ ಚಿಕ್ಕಪ್ಪ ಮಧುಸೂಧನ ಆಚಾರ್ಯರು ಇಲ್ಲಿನ ಸ್ಥಾಪಕ ಅದ್ಯಕ್ಷರಾಗಿದ್ದರು. ಅವರ ಸ್ಥಾನಕ್ಕೆ ಪ್ರಶಾಂತ ಆಚಾರ್ಯರು 1990ರಲ್ಲಿ ನೇಮಕವಾಗಿದ್ದರು. ಅವರು ಅಲ್ಲಿಂದ ಇಲ್ಲಿ ವರೆಗೆ ಶಾಲೆಯ ಕಮಿಟಿಯಲ್ಲಿ ಶಾಲೆಯ ಬಗ್ಗೆ ಅತೀವವಾದ ಆಸಕ್ತಿಯಿಂದ  ಕೆಲಸ  ಮಾಡುತ್ತಿದ್ದಾರೆ. ನಂತರ ನಮ್ಮ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ನಮ್ಮೆಲ್ಲರ ಮಾರ್ಗದರ್ಶಕರಾದ ಶ್ರೀ ಶ್ರೀ ಈಶಪ್ರೀಯ ಸ್ವಾಮಿಗಳ ನಿರ್ದೇಶನದಲ್ಲಿ ನಡೆಯುತ್ತಾ ಇದೆ. ಈ ಊರಿನ ಮಹನೀಯರು, ಶಾಲೆಯ ಮುಖ್ಯಸ್ಥರು ಈ ಶಾಲೆಯನ್ನು ನಿಮ್ಮ ಸಂಸ್ಥೆಯೊಂದಿಗೆ ವಿಲೀನ ಗೊಳಿಸುಲು ಅನಮತಿಯನ್ನು ಕೇಳಿದಾಗ, ಗುರುಗಳು ಸಮ್ಮತಿಯನ್ನು ನೀಡಿದರು. ಹೀಗೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಅಲೆವೂರು ಎಜುಕೇಶನ್‌ ಸೊಸೈಟಿಯನ್ನು ನಡೆಸುವ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಅಲೆವೂರು ನಹರು ಆಂಗ್ಲ ಮಾಧ್ಯಮ ಶಾಲೆ ಇತ್ತೀಚೆಗ ಕರ್ನಾಟಕ ಸರಕಾರದ ಅನುಮತಿಯೊಂದಿಗೆ ಅಲೆವೂರು ಪೂರ್ಣಪ್ರಜ್ಞ್ಪ ಪಬ್ಲಿಕ್‌ ಸ್ಕೂಲ್‌ ಎಂಬುದಾಗಿ ಮರು ನಾಮಕರಣ ಆಗಿದೆ. ಪೂಜ್ಯ ಸ್ವಾಮೀಜಿಯವರಿಗೆ  ಸ್ವಾಗತ ಕೋರುತ್ತಾ, ಅವರೊಂದಿಗೆ ಹಗಲೂ ರಾತ್ರಿ ದುಡಿಯುತ್ತಿರುವ ಬೆಂಗಳೂರಿನಲ್ಲಿರುವ ಅದಮಾರು ಎಜುಕೇಶನ್‌ ಸೊಸೈಟಿಯ ಗೌರವ ಕಾರ್ಯದರ್ಶಿಯಾಗಿರುವ ಡಾ. ಎ. ಪಿ. ಭಟ್‌ ಅವರನ್ನು ಸಹ ಸ್ವಾಗತಿಸಿದರು. ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ   ಪ್ರಕೃತ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಶಿಕ್ಷಣ ನಿರ್ದೇಶಕರಾದ ಡಾ. ಪಿ. ಎಸ್‌ ಐತಾಳ್‌,  ಅಲೆವೂರು ಎಜುಕೇಶನ್‌ ಸೊಸ್ಯೆಟಯ ಸದಸ್ಯ ಹಾಗೂ ಅಲೆವೂರು ಪಂಚಾಯತ್‌ ಇದರ ಇಕಟಪೂರ್ವ ಅದ್ಯಕ್ಷರಾದ ಶ್ರೀ ಹರೀಶ ಸೇರಿಗಾರ್, ಅಲೆವೂರು ಸೊಸೈಟಿಯ ಕಾರ್ಯದರ್ಶಿಯಾಗಿರುವ ಶ್ರೀ ಪ್ರಶಾಂತ ಆಚಾರ್ಯ, ಪೂರ್ಣಪ್ರಜ್ಞ ಆಡಳಿತ ಕಾಲೇಜಿನ ಸ್ಥಾಪಕಾಧ್ಯಾಕ್ಷರಾದ ಡಾ. ಎಮ್‌ ಆರ್‌ ಹೆಗ್ಡೆ, ಅದಮಾರು ಮಠದ ಎಸ್ಟೇಟ್‌ ಆಪೀಸರ್‌ ಆಗಿರುವ ಶ್ರೀ ನಾಗರಾಜ ತಂತ್ರಿ, ಸೊಸ್ಯೆಟಿಯ ಖಜಾಂಚಿಗಳಾದ ಶ್ರೀ ಅಶೋಕ ಕುಮಾರ್‌ ಹಾಗೂ ನರೆದಿರುವ ಎಲ್ಲರನ್ನೂ ಸ್ವಾಗತಿಸಿದರು.

ನಂತರ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರಿ ಪ್ರಶಾಂತ ಆಚಾರ್ಯ ಇವರು ಕಳೆದ ಸಾಲಿನ ಕಾರ್ಯದರ್ಶಿಗಳ ವರದಿಯನ್ನು ಮಂಡಿಸುತ್ತಾ, ಕಳೆದ ಸಾಲಿನ ವಾರ್ಷಿಕ ಮಹಾ ಸಭೆಯು 06-10-2024ರಂದು ಶ್ರೀ ಹರೀಶ್‌ ಸೇರಿಗಾರ್‌ ಅವರ ಅಧ್ಯಕ್ಷತೆಯಲ್ಲಿ ಜರಗಿ, ಅದರಲ್ಲಿ ಖಜಾಂಚಿಯಾಗಿರುವ ಶ್ರೀ ಅಶೋಕ ಕುಮಾರ ಅವರು ಪರಿಶೋಧಿತ ಲೆಕ್ಕಪತ್ರವನ್ನು ಮಂಡಿಸಿ ಅದನ್ನು ಸರ್ವಾನುಮತದಿಂದ ಆಂಗೀಕರಿಸಲಾಗಿದೆ ಎಂದರು. ಅಲ್ಲದೆ 2024-25ರ ಸಾಲಿಗೆ ಅಧ್ಯಕ್ಷರಾಗಿ ಶ್ರೀ ಹರೀಶ್‌ ಸೇರಿಗಾರ್‌ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಹೀಗಿತ್ತು.


1  ಸಂಸ್ಥೆ ನಡೆಸುತ್ತಿರುವ ನೆಹರೂ ಆಂಗ್ಲ ಮಾಧ್ಯಮ ಶಾಲೆಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಬೇರೊಂದು ವಿದ್ಯಾ ಸಂಸ್ಥೆಯ ಸಹಯೋಗವನ್ನು ಪಡೆಯುವುದೆಂದು ನಿರ್ಣಯಿಸಲಾಯಿತು.

2.    ತಾ 01-02-2025ನೇ ಶನಿವಾರ ಮಧ್ಯಾಹ್ನ 3 ಗಂಟೆಗೆ ಅದಮಾರು ಮಠ ಎಜ್ಯುಕೇಶನ್‌ ಕೌನ್ಸಿಲ್‌ ನ ಪ್ರತಿನಿಧಿಗಳಾಗಿ ಶ್ರೀಯುತ ಪುಂಡರೀಕಾಕ್ಷ ಕೊಡಂಚ ಹಾಗೂ ಡಾ, ಶ್ರೀ ರಮಣ ಐತಾಳ್‌ ಇವರೊಂದಿಗೆ ಸಂಸ್ಥೆಯ ನಿರ್ದೇಶಕರ ಮಾತುಕತೆ ನಡೆದು ಎ. ಎಂ. ಇ. ಸಿ. ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಣಯಿಸಲಾಯಿತು.

3.    ಸದರಿ ಆಂಗ್ಲ ಮಾಧ್ಯಮ ಶಾಲೆಯನ್ನು ಅಭಿವೃದ್ಧಿ ಪಡಿಸಿ 2026-27ನೇ ಸಾಲಿನಲ್ಲಿ ಕೇಂದ್ರೀಯ ಪಠಕ್ರಮವನ್ನು ಅಳವಡಿಸಲು ಸಹಕಾರಿ ಆಗುವಂತೆ ಮಾಡಲು ಪರಮ ಪೂಜ್ಯರಾದ ಶ್ರೀ ಶ್ರಿ ಈಶಪ್ರಿಯ ಸ್ವಾಮೀಜಿಯವರನ್ನು ಅಲೆವೂರು ಎಜ್ಯುಕೇಶನ್‌ ಸೊಸೈಟಿ (ರಿ) ಇದರ ಅಧ್ಯಕ್ಷರಾಗಿ ಆಯ್ಕೆ ಮಾಡುವ ನಿರ್ಣಯವನ್ನು ಕೈಗೊಳ್ಳಲಾಯಿತು.

4.    ತಾ. 23-04-2025ನೇ ಬುಧವಾರ ಸಂಜೆ 5.30ಕ್ಕೆ ಸರಿಯಾಗಿ ಏ. ಎಂ.ಇ.ಸಿ. ನ ಉಡುಪಿ ಶಾಖಾ ಕಛೇರಿಯಲ್ಲಿ ಪರಮ ಪೂಜ್ಯ ಸ್ವಾಮೀಜಿಯವರ ಆಧ್ಯಕ್ಷತೆಯಲ್ಲಿ ಅಲೆವೂರು ಎಜ್ಯಕೇಶನ್‌ ಸೊಸೈಟಿಯ ನಿರ್ದೇಶಕರ ಸಭೆ ನಡೆಯಿತು. ಈ ಸಭೆಯಲ್ಲಿ ಎರಡೂ ಸಂಸ್ಥೆಗಳ ಪದಾಧಿಕಾರಿಗಳನ್ನು ಒಳಗೊಂಡ ಜಂಟಿ ತಾತ್ಕಾಲಿಕ ಸಮಿತಿಯನ್ನು ರಚಿಸಲಾಯಿತು. ಶ್ರೀಯುತ ಡಾ. ಶ್ರೀರಮಣ ಐತಾಳ್‌, ಡಾ ಎ. ಪಿ. ಭಟ್‌, ಶ್ರೀ ಜಿ. ವಿ. ಕೃಷ್ಣ, ಶ್ರೀ ಗೋಪಾಲ ಶಬರಾಯ, ಶ್ರೀ ಕೆ. ನಾಗರಾಜ ತಂತ್ರಿ, , ಶ್ರೀ ಎ. ಹರೀಶ್‌ ಸೇರಿಗಾರ್‌, ಶ್ರೀ ಎ. ಪ್ರಶಾಂತ ಆಚಾರ್ಯ, ಶ್ರೀ ಅಶೋಕ ಕುಮಾರ್‌, ಶ್ರೀ ಶ್ರೀಕಾಂತ ನಾಯಕ್‌, ಶ್ರೀ ಎ. ಯತೀಶ್‌ ಕುಮಾರ್‌ - ಇವರುಗಳನ್ನು ಈ ಸಮಿತಿಯಲ್ಲಿ ಸೇರಿಸಲಾಯಿತು.

5.    ಸದ್ರಿ ಶಾಲೆಯ ಹೆಸರನ್ನು “ಅಲೆವೂರು ಪೂರ್ಣಪ್ರಜ್ಞ ಪಬ್ಲಿಕ್‌ ಸ್ಕೂಲ್‌” ಎಂಬ ನೂತನ ಹೆಸರಿನೊಂದಿಗೆ ಮರುನಾಮಕರಣ ಮಾಡಲು ನಿರ್ಣಯಿಸಲಾಯಿತು.ಶ್ರೀ ಪ್ರಶಾಂತ ಆಚಾರ್ಯರು ತಮ್ಮ ವರದಿಯನ್ನು ಮುಂದುವರಿಸುತ್ತಾ ಶಾಲೆಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಅದಮಾರು ಎಜ್ಯುಕೇಶನ್‌ ಕೌನ್ಸಿಲ್‌ನೊಂದಿಗೆ ಕೈ ಜೋಡಿಸಿರುವುದು ನಮ್ಮ ಸೌಭಾಗ್ಯವಾಗಿದೆ ಎಂದು ಹೇಳಿದರು. ಅಲ್ಲದೆ ಕಳೆದ 60 ವರ್ಷಗಳ ಅಭಿವೃದ್ಧಿಯಲ್ಲಿ ಈ ಸಂಸ್ಥೆಯನ್ನು ಮುನ್ನಡೆಸಿದೆ ಹಲವಾರು ಹಿರಿಯರಿಗೆ ವಂದನೆಗಳನ್ನು ಸಲ್ಲಿಸಿದರು. ತನ್ನ ಪ್ರಥಮ ಪರ್ಯಾಯದಲ್ಲಿ ಹಲವಾರು ನೂತನ ಯೋಜನೆಗಳನ್ನು ಜಾರಿಗೆ ತಂದ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಅಮೃತ ಹಸ್ತದಿಂದ ಕಳೆದ ಜುಲೈ 2ರಂದು ಶಿಲನ್ಯಾಸಗೊಂಡು ತ್ವರಿತ ಗತಿಯಲ್ಲಿ ಸಾಗುತ್ತಿರುವ ನೂತನ ಕಟ್ಟಡದ ಕಾಮಗಾರಿ ಕಲವೇ ತಿಂಗಳುಗಳಲ್ಲಿ ಉದ್ಘಾಟನೆಗೊಳ್ಳಲಿವೆ, ಎನ್ನುತ್ತಾ ಅಲೆವೂರಿನ ಇತಿಹಾಸದಲ್ಲಿ ಒಂದು ದೊಡ್ಡ ವಿದ್ಯಾಸಂಸ್ಥೆಯಾಗಿ ಈ ಶಾಲೆ ಮೂಡಿಬರಲೆಂದು ಹಾರೈಸುವುದರ ಜತೆಗೆ ಇದಕ್ಕೆ ಪೂರಕವಾದ ಸಹಾಯವನ್ನು ಅಲೆವೂರು ಎಜ್ಯಕೇಶನ್‌ ಸೊಸೈಟಿ ಇದರ ಸದಸ್ಯರು ನೀಡುತ್ತೇವೆ ಎಂಬ ಆಶ್ವಾಸನೆಯನ್ನು ನೀಡಿದರು.

ಅಲೆವೂರು ಎಜ್ಯುಕೇಶನ್‌ ಸೊಸೈಟಿಯ ಲೆಕ್ಕ ಪತ್ರಗಳನ್ನು ಸಂಸ್ಥೆಯ ಖಜಾಂಚಿಗಳಾದ ಶ್ರೀ ಹರೀಶ್‌ ಕುಮಾರ್‌ ಅವರು ಲೆಕ್ಕಪತ್ರಗಳನ್ನು ಮಂಡಿಸಿ ಸದಸ್ಯರ ಒಪ್ಪಿಗೆ ಪಡೆದರು. ಲಿಕ್ಕ ಪತ್ರದ ಪರಿಶೋಧನೆ ಮಾಡಲು ಸಿ. ಎ ಜನಾರ್ಧನ  ಅವರನ್ನು ನೇಮಕ ಮಾಡುವುದೆಂದು ನಿರ್ಣಯಿಸಲಾಯಿತು.


ಮುಂದೆ  2025-26 ನೇ ಸಾಲಿನ ನೂತನ ಕಮಿಟಿಯನ್ನು ರಚಿಸುವರೆ ಡಾ. ಶ್ರೀರಮಣ ಐತಾಳರು ಪ್ರಸ್ತಾಪಿಸುತ್ತಾ, ಸಂಸ್ಥೆಯ ಹಿನ್ನಲೆಯನ್ನು ಹೇಳಿದರು. ಪ್ರಪ್ರಥಮವಾಗಿ ಈ ಪ್ರದೇಶದಲ್ಲಿ, ಶ್ರೀ ಸ್ವಾಮೀಜಿಯವರ ಆಶಯದಂತೆ ಒಂದು ಆದರ್ಶ ವಿದ್ಯಾಸಂಸ್ಥೆ ಮಾಡಬೇಕೆಂದು ಆಲೋಚಿಸಿದಾಗ, ಉಡುಪಿ ಅದಮಾರು ಮಠದ ವ್ಯಾಪ್ತಿಯಲ್ಲಿರುವ ಸುಭೋಧಿನಿ ಶಾಲೆಯ ವಿಚಾರ ಪ್ರಸ್ತಾಪಿಸಲಾಗಿತ್ತು. ಆ ಶಾಲೆಯನ್ನು ಹೇಗೆ ಒಂದು ಸಿ. ಬಿ. ಎಸ್‌. ಸಿ ಸ್ಕೂಲ್‌ ಮಾಡುವುದೆಂದು  ತೀರ್ಮಾನ ಮಾಡುವ ಬಗೆ ಚರ್ಚಿಸಿದೆವು. ಆಗ ಬಂದ ಸಮಸ್ಯೆ, ಆ ಸ್ಥಳವು ಮುಂದಿನ ಅಭಿವೃದ್ಧಿ ದೃಷ್ಟಿಯಿಂದ ಸಮರ್ಪಕವಾಗಿರಲಿಲ್ಲ. ಸಿಬಿಎಸ್‌ ಸ್ಕೂಲ್‌ ಮುಂದೆ 12 ನೇ ಕ್ಲಾಸಿನ ವರೆಗ ವಿಸ್ತರಿಸುವುಕ್ಕೆ ಆ ಸ್ಥಳ ಪೂರಕವಾಗಿರಲ್ಲ. ಆಗ ಸ್ವಾಮೀಜಿಯವರಿಗೆ ಒಂದು ಹೊಸ ಪ್ರಸ್ತಾವ ಬಂತು. ಅಲೆವೂರು ಎಜ್ಯುಕೇಶನ್‌ ಸೊಸೈಟಿಯ ಪ್ರಸ್ತಾವ ಬಂತು. ಸ್ವಾಮೀಜಿಯವರು ನಮ್ಮೊಂದಿಗೆ ಚರ್ಚಿಸಿ ಈ ಪ್ರಸ್ಥಾವದ ಅನುಕೂಲತೆ ಅನಾನುಕೂಲತೆಯ ಬಗೆಗೆ ವಿಶದವಾಗಿ ಚರ್ಚಿಸಿ ಈ ಸಂಸ್ಥೆಗೆ ಹೊಸ ದೃಷ್ಟಿಕೋನವನ್ನು ನೀಡಲು ಸಮ್ಮತಿಯನ್ನು ನೀಡಿದರು. ಇದಕ್ಕೆ ಸಂಬಂದಿಸಿದ ಒಪ್ಪಿಗೆ ಪತ್ರಕ್ಕೆ ಸಮ್ಮತಿಯನ್ನು ನೀಡಲಾಯಿತು. ಕಾಲೇಜನ್ನು ಹಾಗೂ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಿ ಅನುಭವವಿದ್ದ ನನಗೆ ಸ್ವಾಮೀಜಿಗಳ ಈ ನಿಲುವು ತುಂಬ ಸಂತಸವನ್ನು ನೀಡಿದ್ದಲ್ಲದೆ, ಹೊಸ ಅವಿಷ್ಕಾರಕ್ಕೆ ನನ್ನನ್ನು ಧುಮುಕುವಂತೆ ಮಾಡಿತು. ಈ ಶಾಲೆಯನ್ನು ಉಡುಪಿ ಜಿಲ್ಲೆಯಲ್ಲಿ ಒಂದು ಉತ್ತಮ ಶಾಲೆಯಾಗಿ ಮಾಡುವುದು ನಮ್ಮ ಸ್ವಾಮೀಜಿಯವರ ಆಶಯ. ಆ ಕಾರ್ಯದಲ್ಲಿ ನಾವೆಲ್ಲ ತೊಡಗಿದ್ದೇವೆ. ಈ ಕಮಿಟಿಯಲ್ಲಿ ಡಾ. ಸುರೇಶರಮಣ ಮಯ್ಯ ಖಜಾಂಚಿಯಾಗಿ ಕೆಲಸ ಮಾಡುತ್ತಿದ್ದಾರೆ. ಹುಟ್ಟೂರು ಜೀವನದಲ್ಲಿ ತುಂಬ ಪ್ರಾಮುಖ್ಯ. ಆದ್ದರಿಂದ, ಆ ಶಾಲೆಯ ಹೆಸರನ್ನು ಅಲೆವೂರಿನಿಂದ ಪ್ರಾರಂಭಿಸೋಣ ಎಂಬ ಸ್ವಾಮೀಜಿಯವರ ಆಶಯ ನಮೆಗೆಲ್ಲರಿಗೂ ಸಂತಸವನ್ನು ನೀಡಿದೆ.  ಹಾಗೆ ನೂತನವಾದ ಈ ಸಂಸ್ಥೆಗೆ ಅಲೆವೂರು ಪೂರ್ಣಪ್ರಜ್ಞ ಪಬ್ಲಿಕ್‌ ಸ್ಕೂಲ್‌ ಎಂದು ಹೆಸರಿಸಲಾಯಿತು. ಆ ಪ್ರಕಾರ ಹಿಂದಿನ ನೆಹರೂ ಇಂಗ್ಲೀಷ್ ಸ್ಕೂಲನ್ನು ಅಲೆವೂರು ಪೂರ್ಣಪ್ರಜ್ಞ ಪಬ್ಲಿಕ್‌ ಸ್ಕೂಲ್‌ ಎಂದು ಮರು ನಾಮಕರಣ ಮಾಡಲಾಯಿತು. ನಮ್ಮ ದೇಶದ ಉತ್ತಮ ಸಿ. ಬಿ. ಎಸ್‌ ಸ್ಕೂಲುಗಳ ಹೆಸರಿನಲ್ಲಿ ಪಬ್ಲಿಕ್‌ ಸ್ಕೂಲ್‌ಗಳು ಮುಖ್ಯ, ಹಾಗೆ ಅದರೊಂದಿಗೆ ಪಬ್ಲಿಕ್‌ ಸ್ಕೂಲ್‌ ಸೇರಿಕೊಂಡಿದೆ. ನಾವು ನಿಮ್ಮ ಅಲೆವೂರಿನ ಜನರೊಂದಿಗೆ ಸೇರಿಕೊಂಡು ಅದಮಾರು ಎಜ್ಯಕೇಶನ್‌ ಸೊಸೈಟಿಯವರು ಪೂಜ್ಯ ಗರೂಜಿಯವ ಆಶಯದೊಂದಿಗೆ ಒಂದು ಒಳ್ಳೆ ವಿದ್ಯಾ ಸಂಸ್ಥೆಯನ್ನು ನೀಡಬೇಕೆಂದು ತೆಗೆದುಕೊಂಡ ನಿರ್ಣಯ ಇಂದು ಸಾಕಾರವಾಗುತ್ತದೆ. ಇಲ್ಲಿನ ಜಾಗಕ್ಕೆ ಹೊಂದುವ ಹೊಸ ಕಟ್ಟಡದ ನೀಲನಕ್ಚೆಯನ್ನ ಬಹಳ ಚೆಂದವಾಗಿ ಉಡುಪಿಯ ಪ್ರಸಿದ್ಧ ಇಂಜಿಯರ್‌ ಆದ ಶ್ರೀ ರಾಜೇಂದ್ರ ಮಯ್ಯರು ಮಾಡಿಕೊಟ್ಟಿದ್ದಾರೆ. ಅವರು ಇಲ್ಲಿ ಇದ್ದಾರೆ. ನಮ್ಮ ಯೋಜನೆ ಪ್ರಕಾರ ಇದರ ಪ್ರಥಮ ಹಂತದ ಕಟ್ಟಡ ಇನ್ನು ಆರು ತಿಂಗಳಲ್ಲಿ ಆಗಬೇಕು, ಅದರೊಂದಿಗೆ ನಮಗೆ ಸಿಬಿಎಸ್‌ಸಿಇ ಅನುಮತಿ ಅದರೊಳಗೆ ಬರಬೇಕು. ಬರುವ ವರ್ಷಕ್ಕೆ ಇಲ್ಲಿ ಸಿಬಿಸ್‌ಸಿಇ ಕರಿಕುಲಮ್‌ ನಾವು ಪ್ರಾರಂಭಿಸುತ್ತೇವೆ. ಸ್ವಾಮಿಗಳ ಆಶಯದಂತೆ ಸುಮಾರು 50 ಬಸ್ಸುಗಳ ಮೂಲಕ ಇಲ್ಲಿನ ಸುತ್ತು ಮುತ್ತಲಿನ 25 ಕಿಲೋ ಮೀಟರಿನ ವ್ಯಾಪ್ರಿಯಲ್ಲಿಸಂಚರಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಿಶಿಷ್ಠವಾದ ಸೇವೆಯನ್ನು ಸಲ್ಲಿಸುವ ಇರಾದೆಯೊಂದಿಗೆ ಸಂಸ್ಥೆ ಆರಂಭವಾಗಲಿದೆ. ಈ ಊರಿನವರ ಸಹಕಾರ, ತನು, ಮನ ಧನ – ಎಲ್ಲ ಬೇಕಾಗಿದೆ. ಸ್ವಾಮೀಜಿಯವರ ಕನಸು ನೆನಸು ಮಾಡುವುದು ನಮ್ಮೆಲ್ಲರ ಕರ್ತವ್ಯ. ಆಡಳಿತಕ್ಕೆ ಸಂಭಂದಿಸಿದ ಮಂತ್ರ – It is possible, today is my day, God is with me, we are the humans, ಹೀಗೆ ನಾವು ಒಂದು ಒಳ್ಳೆಯ ಪಬ್ಲಿಕ್‌ ಸ್ಕೂಲ್‌ ಮಾಡಲು ಸ್ವಾಮೀಜಿಯವರ ಆಶಯದಂತೆ ಹೊರಟಿದ್ದೇವೆ. ಒಳ್ಳೆಯ ದಿನ ನೋಡಿ ಸ್ವಾಮೀಜಿಯವರು ಕೆಸರು ಕಲ್ಲು ಹಾಕಿದ್ದಾರೆ. ಈಗ ಕೆಲಸ ಭರದಿಂದ ಸಾಗುತ್ತಿದೆ. ಒಳ್ಳೆಯ ಡಿಸೈನ್‌ ಮಾಡಿದ್ದೇವೆ. ಸ್ಕೂಲಿನ ಹೆಸರು ಬದಲಾಗಿದೆ, ಅಲೆವೂರು ಪೂರ್ಣಪ್ರಜ್ಞ ಪಬ್ಲಿಕ್‌ ಸ್ಕೂಲ್‌ ಎಂದಾಗಿದೆ. ಇನ್ನೇನು ಕೇವಲ ಆರು ತಿಂಗಳಲ್ಲಿ ಶಾಲೆಯ ಪ್ರಥಮ ಹಂತ ಸಂಪೂರ್ಣವಾಗಲಿದೆ. ಅಡಿಟೊರಿಯಮ್‌ಗೆ ಪೈಂಟು ಸಾರಿಸಲಾಗಿದೆ, ಇಡೀ ಹಾಲ್‌ಗೆ ಫಾಲ್ಸ್‌ ಸೀಲಿಂಗ್‌ ಹಾಕಬೇಕೆಂದು ಸ್ವಾಮಿಗಳು ಹೇಳಿದ್ದಾರೆ. ಹೊಸ ಬೆಂಚುಗಳು ಬಂದಿದೆ, ಕಂಪ್ಯೂಟರುಗಳು ಬರಲಿವೆ. ಹಾಗೆ ಇನ್ನುಳಿದ ಹಳೇ ಕಟ್ಟಡಗಳನ್ನು ಹೊಸ ಕಟ್ಟಡದಂತೆ ಮಾಡುವ ಉಪಕ್ರಮಕ್ಕೆ ಕೈಹಾಕಲಿದ್ದೇವೆ. ಒಳ್ಳೆಯ ಮಾದರಿಯ ಶಾಲೆಯಾಗಬೇಕೆಂಬುದು ನಮ್ಮ ಗುರುಗಳಾದ ಡಾ. ಎ. ಪಿ ಭಟ್ಟರ ಆಶಯ. ಈ ಶಾಲೆಯ ಆಡಳಿತಾಧಿಕಾರಿಗಳಾದ ಕೊಡಂಚರ ಕನಸು ಸಹ ಇದಾಗಿದೆ. ಉಡುಪಿ ಜಿಲ್ಲೆಯಲ್ಲಿ ಈ ಶಾಲೆಯು ಅತ್ಯಂತ ಉನ್ನತ ದರ್ಜೆಯ ಶಾಲೆಯಾಗಬೇಕೆಂಬುದು ನ್ಮಮ್ಮೆಲ್ಲರ ಆಶಯ. ಇದು ವಿಭುದೇಶ ತೀರ್ಥರ ಕನಸು, ಉಡುಪಿಯಲ್ಲಿ ಒಂದು ಉತ್ತಮ ಶಾಲೆ ಆರಂಬಿಸ ಬೇಕು, ಇದು ಈಶಪ್ರಿಯರ ಕನಸು, ಇದು ಸಾಕಾರವಾಗುತ್ತಿದೆ. ಇಲ್ಲಿ ಸುಮಾರು 9 ಎಕ್ರೆ ಜಾಗೆಯಲ್ಲದೆ, ಮತ್ತೂ ಹೆಚ್ಚಿದೆ.  


ಇದನ್ನು ಒಂದು ಉತ್ತಮ ಶಿಕ್ಷಣ ಸಂಸ್ಥೆಯಲ್ಲದೆ, ಮಕ್ಕಳಿಗೆ ಅಟೋಟಗಳಿಗೆ ಬೇಕಾದ ಉತ್ತಮ ಅನುಕೂಲತೆಗಳನ್ನು ಕಲ್ಪಿಸುವುದು ನಮ್ಮ ಸ್ವಾಮೀಜಿಗಳ ಅಭಿಪ್ರಾಯ, ಇದನ್ನು ಒಂದು ಉತ್ತಮ ರೆಸಿಡೆನ್ಸಿಯಲ್‌ ಶಾಲೆ ಆಗಿ  ಅಭಿವೃದ್ಧಿಗೊಳಿಸುವುದು ನಮ್ಮ ಸ್ವಾಮೀಜಿಯವರ ಆಭಿಪ್ರಾಯ. ಅವರ ಆಶಯ, ಉತ್ತಮ State of the Art ಈಜುಕೊಳ, ಹುಡುಗರ ಹಾಗೂ ಹುಡುಗಿಯರ ವಸತಿ ಗೃಹ, ಹಾಗೇ ಅದ್ಯಾಪಕರ ವಸತಿ ಗೃಹ, ಮುಂದೆ ಒಂದು ವೃದ್ಧಾಶ್ರಮ ಮಾಡುವ ಯೋಜನೆ ಇದೆ. ಇದಕ್ಕೆ ಅವಕಾಶವನ್ನು ಕಲ್ಪಿಸುವ ಯೋಜನೆಯಿದೆ. ಹಾಗೆ ಈ ಕ್ಯಾಂಪಸ್‌ನಲ್ಲಿಅಭಿವೃದ್ಧಿಯ ಕನಸಿದೆ, ಸ್ವಾಮಿಗಳ ಕನಸನ್ನು ಸಾಕಾರ ಮಾಡುವುದರ ಜತೆಗೆ ಈ ಮಕ್ಕಳಿಗೆ ಪ್ರತಿದಿನ ಒಳ್ಳೆಯ ಊಟ ಕೊಡಬೇಕೆಂಬ ಯೋಜನೆಯಿದೆ. ರುಜಿಕರ ಹಾಗೂ ಶುಚಿಕರ ಊಟಕೊಡುವಲ್ಲಿ, 60 ವರ್ಷದ ಇತಿಹಾಸವಿರುವ ಈ ಶಾಲೆಯ ಸುಮಾರು 300 ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ಸೇವೆಯನ್ನು, ಗುರುತಿಸಬೇಕು, ಅವರ ಹುಟ್ಟುಹಬ್ಬವನ್ನು ಈ ಶಾಲೆಯಲ್ಲಿ ವಿದ್ಯಾರ್ಥಿಗ ಸಮ್ಮುಖದಲ್ಲಿ ಆಚರಿಸಿ ಅವರ ವತಿಯಿಂದ ಪ್ರತಿದಿನ ಉತ್ತಮ ಊಟ ಕೊಡುವ ಬಗ್ಗೆ ಸ್ವಾಮೀಜಿಗಳ ಕನಸು, ಅದನ್ನು ಸಾಕಾರಗೋಳಿಸುತ್ತೇವೆ. ಕಾರ್ಯಕಾರಿ ಮಂಡಳಿಯಲ್ಲಿ – ಅಧ್ಯಕ್ಷರು – ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಕಾರ್ಯದರ್ಶಿಯಾಗಿ ಶ್ರೀ ಪ್ರಶಾಂತ ಆಚಾರ್ಯರಿದ್ದಾರೆ, ಖಜಾಂಚಿಯಾಗಿ ಶ್ರೀ ಸಿ ಎ ಪ್ರಶಾಂತ ಹೊಳ್ಳರಿದ್ದಾರೆ. ಉಳಿದಂತೆ ಆಡಳಿತ ಮಂಡಳಿಯ ಸದಸ್ಯರಾಗಿ ಶ್ರೀ ಎ. ಪಿ ಭಟ್‌, ಶ್ರೀ ಜಿ. ವಿ ಕೃಷ್ಣ, ಶ್ರೀ ಗೋಪಾಲ ಶಬರಾಯ, ಶ್ರೀ ನಾಗರಾಜ ತಂತ್ರಿ, ಡಾ. ಪಿ. ಎಸ್.‌ ಐತಾಳ್‌, ಸ್ರೀ ಹರೀಶ್‌ ಸೇರಿಗಾರ್‌, ಶ್ರೀ ಅಶೋಕ ಕುಮಾರ್‌, ಶ್ರೀ ಯತೀಶ್‌ ಕುಮಾರ್‌ ಹಾಗೂ ಶ್ರೀ ಶ್ರೀಕಾಂತ ನಾಯಕ್‌ ಇದ್ದಾರೆ, ಈ ಶಾಲೆಯ ಜಾಲತಾಣ ಸಕ್ರೀಯವಾಗಿದೆ. ಇದರ ವಿಳಾಸ www.alevoorpps.in, ಇದರಲ್ಲಿ ಈ ಶಾಲೆಗೆ ಸಂಭಂದಿಸಿದ ಎಲ್ಲಾ ವ್ಯಕ್ತಿಗಳ ವಿವರಗಳನ್ನು ನೀಡಲಿಕ್ಕಿದೆ. ಈ ಶಾಲೆಯ ಸಲಹೆಗಾರರಾಗಿ ಒಂದು ದೊಡ್ಡ ಕಮಿಟಿಯನ್ನು ಮಾಡಲಿಕ್ಕಿದೆ. ಅದರಲ್ಲಿ ಕೆಲವರು – ಇದರಲ್ಲಿ ಡಾ. ಎ, ಪಿ ಭಟ್‌, ಪ್ರಧಾನ ನಿರ್ದೇಶಕರು, ಡಾ ಪಿ. ಎಸ್‌ ಐತಾಳ್‌, ಶಾಲಾ ಕಾರ್ಯದರ್ಶಿ, ಡಾ. ಸುರೇಶರಮಣ ಮಯ್ಯ – ಶಾಲಾ ಖಜಾಂಚಿ, ಡಾ. ಜಿ. ಎಸ್‌ ಚಂದ್ರಶೇಖರ್‌ - ಪ್ರಧಾನ ಸಲಹೆಗಾರರು, ಶ್ರೀ ಶ್ರೀಧರ್‌ ಕೆ. ರಾವ್‌ - ಪ್ರಧಾನ ಸಲಹೆಗಾರರು, ಶ್ರೀ ಎಮ್‌ ಆರ್‌ ಹೆಗ್ಡೆ, ಸಲಹೆಗಾರರು, ಡಾ. ಶಶಿಕಿರಣ ಉಪಾಧ್ಯ – ಸಲಹೆಗಾರರು, ಶ್ರೀ ಗಣೇಶ ಹೆಬ್ಬಾರ್‌, ಸಲಹೆಗಾರರು, ಶ್ರೀ ರಮೇಶ ರಾವ್‌ ಸತಾರ್-‌ ಸಲಹೆಗಾರರು, ಶ್ರೀ ಎಮ್‌ ಆರ್‌ ವಾಸುದೇವ- ಸಲಹೆಗಾರರು, ಶ್ರೀ ರಘುಪತಿ ಉಪಾಧ್ಯ -ಸಲಹೆಗಾರರು, ಶ್ರೀ ಶೇಖರ ಕಲ್ಮಾಡಿ – ಸಲಹೆಗಾರರು, ಶ್ರೀ ನಾಗರಾಜ ತಂತ್ರಿ – ಸಲಹೆಗಾರರು, ಶ್ರೀ ಎ. ಪಿ ಕೊಡಂಚ – ಶಾಲಾ ಆಡಳಿತಾಧಿಕಾರಿಗಳು, ಶ್ರೀ ರಘುಪತಿ ಆಚಾರ್ಯ – ಸಲಹೆಗಾರರು, ಶ್ರೀ ಪ್ರಸಾದ ಆಚಾರ್ಯ – ಸಲಹೆಗಾರರು, ಡಾ ಸುದರ್ಶನ್-‌ ಸಲಹೆಗಾರರು, ಹೀಗೆ ಹಲವಾರು ಮಂದಿ ಸಲಹೆಗಾರರಾಗಿ ಇದ್ದಾರೆ.

ಅದಮಾರು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ. ಎ. ಪಿ ಭಟ್‌ ಮಾತನಾಡುತ್ತಾ -ಕೋಟ ಹೈಸ್ಕೂಲನ್ನು ಕಟ್ಟುವಾಗ ಶ್ರೀ ಶಿವರಾಮ ಕಾರಂತರ ಅಣ್ಣ ಶ್ರೀ ಕೆ. ಎಲ್‌ ಕಾರಂತರು ಯಾವುದೇ ಮೂಡನಂಬಿಕೆಗೆ ಆಸ್ಪದ ಕೊಡದೆ ಉದಾತ್ತ ಮನಸ್ಸಿನಿಂದ, ದೂರ ದೃಷ್ಟಿಯಿಂದ ಕೆಲಸ ಮಾಡಿದ ಕಾರಣ ಆ ಶಾಲೆ ಇಂದು ಅತ್ಯುತ್ತಮ ಶಾಲೆಯಾಗಿದೆ. ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವಾಗ ಹಲವಾರು ಉದಾತ್ತ ಚೇತನಗಳು ಕೆಲಸ ಮಾಡಿದೆ ಎಂಬದು ಆ ಶಾಲೆಯ ಚರಿತ್ರೆಯ ಪುಟಗಳಿಂದ ಅರಿವಾಗುತ್ತದೆ.


ಎಷ್ಟೋ ಸಲ ಈ ಶಾಲೆಯ ಗ್ರೌಂಡಿನಲ್ಲಿ ಆಕಾಶಕಾಯ ವೀಕ್ಷಿಸುವ ಕಾರ್ಯ ಮಾಡಿದ್ದೇವೆ. ಇದೊಂದು ದೇವಸ್ಥಾನದಂತೆ. ನೂರಾರು ವರ್ಷಗಳ ಕಾಲ ಈ ದೇವಸ್ಥಾನ ಉಳಿಯಬೇಕು. ಬೇಲೂರು ಹಳೆಬೀಡು ನೋಡಿ? ಪೂರ್ಣಪ್ರಜ್ಷದವರು ದೇವಸ್ತಾನ ಕಟ್ಟುತ್ತಿದ್ದೇವೆ ಈವತ್ತು. ನೂರಾರು ವರ್ಷಗಳ ಕಾಲ ಈ ದೇವಸ್ಥಾನ ಉಳಿಯಬೇಕು. ಬೆಳಗ ಬೇಕು. ಇದು ಈ ಊರಿಗೆ, ಈ ಉಡುಪಿಗೆ, ಈ ಜಿಲ್ಲೆಗೆ, ಈ ರಾಜ್ಯಕ್ಕೆ, ಈ ದೇಶಕ್ಕೆ ಒಂದು ಮಾದರಿ ಶಾಲೆಯಾಗಬೇಕು. ಪ್ರತಿಯೊಬ್ಬರು ಬೆವರು ಸುರಿಸ ಬೇಕು. ಕಾಟಾಚಾರಕ್ಕೆ ಎಂದೂ ಕಲಸಮಾಡಬಾರದು. ದೇವಸ್ಥಾನ ಆಗಬೇಕು. ವಿಭುದೇಶ ತೀರ್ಥರ ನೇರ ನುಡಿ, ಯಾವುದೇ ಮುಲಾಜಿಲ್ಲದ, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದ ಅವರ ಧೋರಣೆ ನಮಗೆ ಆದರ್ಶಪ್ರಾಯ. ವೀಡಿಯಾ ಪೂರ್ಣಪ್ರಜ್ಷ ಶಾಲೆಗೆ ಹೋದಾಗ ನಾವು ನಮ್ಮನ್ನೆ ಮರೆಯುತ್ತೇವೆ. ಅದು ವಿಭುದೇಶ ತೀರ್ಥರ ಕನಸು, ಅವರ ದೇವಸ್ಥಾನ. ಆ ಕ್ಯಾಂಪಸ್‌ನಲ್ಲಿ ಶಿಕ್ಷಕರು ಪಾಠ ಮಾಡಲು ಎಲ್ಲಾ ಪ್ರಾಣಿ ಪಕ್ಷಿಗಳು ಆ ಶಾಲೆಯಲ್ಲಿ ಸಿಗುತ್ತದೆ. ಇದು ಗುರುಗಳ ಆಶಯ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರ ಬೇಕು. ನಾನೀಗ ವಿಭುದೇಶ ಪ್ರಿಯರನ್ನು ಈಶಪ್ರಿಯರಲ್ಲಿ ಕಾಣುತ್ತಿದ್ದೇನೆ. ಇವರ ಕನಸನ್ನು ನಾವೆಲ್ಲ ಸೇರಿ ಸಾಕಾರ ಮಾಡುವ. ಎಲ್ಲ ಹಿರಿಯರ ಆಶೀರ್ವಾದ ನಮ್ಮ ಮೇಲೆ ಇರಲೆಂದು ಹಾರೈಸಿದರು.

ಈ ಶಾಲೆಗೆ ಸುಮಾರು 60 ವರ್ಷ, ಇದನ್ನು ಒಂದು ಉತ್ತಮ ಕಾರ್ಯಕ್ರಮದ ಮೂಲಕ ಬರುವ ಡಿಸೆಂಬರ್‌ ತಿಂಗಳಲ್ಲಿ ಒಂದು ಉತ್ತಮ ಕಾರ್ಯಕ್ರಮ ಮಾಡಬೇಕೆಂಬ ಅಪೇಕ್ಷೆ ಇದೆ ಎಂದು ಶ್ರೀ ಪ್ರಶಾಂತ ಆಚಾರ್ಯರು ಹೇಳಿದರು.

ಸಂಸ್ಥೆಯ ಅಧ್ಯಕ್ಷರಾದ ಶ್ರೀ ಈಶಪ್ರಿಯ ತೀರ್ಥರು ಮಾತನಾಡುತ್ತಾ “ವಿಭುದೇಶ ತೀರ್ಥರು ಯಾವುದೇ ಒಂದು ಕಾರ್ಯ ಆರಂಬ ಮಾಡುವಾಗ ಅದನ್ನು ಹಲವಾರು ವರ್ಷಗಳ ಕಾಲದ ಯೋಜನೆಯಾಗಿ ರೂಪೀಕರಿಸುತ್ತಿದ್ದರು. ಹಲವಾರು ಶಾಲೆಗಳನ್ನು ಆರಂಬಿಸಲು ಆ ಕಾಲದಲ್ಲಿ ತುಂಬ ಪ್ರಯತ್ನ ಮಾಡಿದ್ದಾರೆ. ಅವರು ಅಂದು ಕನಸು ಕಾಣುತ್ತಾ ನಮ್ಮ ದೇಶದ ಪ್ರತಿಭಾವಂತರು ಬೇರೆ ದೇಶಕ್ಕೆ ಹೋಗಬಾರದು, ಅವರ ಸೇವೆ ಇಲ್ಲಿ ಸಿಗಬೇಕೆಂದು ಪೂರ್ಣಪ್ರಜ್ಞ ಇನ್‌ಸ್ಟ್ಯೂಟ್‌ ಆಪ್‌ ಸಯಂಟಿಪಿಕ್‌ ರಿಸರ್ಚ್‌, ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಕಾರಣ ಉಡುಪಿಯಲ್ಲಿ ಶಾಲೆ ಸ್ತಾಪಿಸುವ ಕಾರ್ಯ ನೆನೆಗುದಿಗೆ ಬಿತ್ತು. ಅದು ಸ್ವಲ್ಪ ಹಿಂದೆ ಸರಿಯಿತು. ಅವರು ಈ ಅವಕಾಶ ನಮಗೆ ಕೊಟ್ಟಿದ್ದಾರೆ. ಇಂದು ಈ ಶಾಲೆಯನ್ನು ನಾವೆಲ್ಲ ಸೇರಿ ಒಂದು ಉತ್ತಮ ಶಾಲೆಯಾಗಿ ರೂಪೀಕರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಇಂದು ನಮ್ಮ ಉದ್ದೇಶ ಬಹು ದೊಡ್ಡದಿದೆ. ಇದನ್ನು ಒಂದು ಮಾದರಿ ಶಾಲೆಯಾಗಿ ಮಾಡಬೇಕು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಬರಬೇಕಾದರೆ ಉತ್ತಮ ಅದ್ಯಾಪಕರು ಆ ಶಾಲೆಗೆ ಬೇಕಾಗಿದ್ದಾರೆ. ಅಂತಹ ಅದ್ಯಾಪಕರು ಇಲಿ ಸೇವೆ ಮಾಡುವ ಹಾಗೆ ಮಾಡಬೇಕು. ಶ್ರೀ ರಮಣ ಐತಾಳರು ಮಂಗಳೂರಿನ ವಿದ್ಯಾ ಸಂಸ್ಥೆಗಳಲ್ಲಿ ಅಪಾರ ಅನುಭವ ಹೊಂದಿದವರು. ಅವರ ಸೇವೆ ನಮಗೆ ಸಿಗುತ್ಥಾ ಇದೆ. ನಾವು ತುಂಬಾ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟು ಒಂದು ವಿದ್ಯಾಸಂಸ್ಥೆಯನ್ನು ಕಟ್ಟಿದಾಗ ನಾವು ನಮ್ಮ ಪ್ರತಿಸ್ಪರ್ಧಿಗಳಿಗೆ ಹೆದರಬೇಕಾಗಿಲ್ಲ. ವಿಭುದೇಶ ತೀರ್ಥರ, ವಿಭುಧ ಪ್ರಿಯರ ಕನಸನ್ನು ನೆನಸು ಮಾಡುವ. ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಠಿಸಿ ಒಂದು ಉತ್ತಮ ಸಾಧನೆ ಮಾಡುವ ಉದ್ದೇಶ ಹೊಂದಿದ್ದೇವೆ” ಎಂದು ಆಶೀರ್ವಾದಿಸಿದರು.


ಕೊನೆಯಲ್ಲಿ ಅಲೆವೂರು ಎಜ್ಯುಕೇಶನ್‌ ಸೊಸೈಟಿಯ ಸದಸ್ಯರಾದ ಶ್ರೀ ಶ್ರೀಕಾಂತ ನಾಯಕ್‌ ಅವರು ವಂದನಾರ್ಪಣೆ ಸಲ್ಲಿಸಿದರು. 









































ಅಲೆವೂರು ಎಜುಕೇಶನ್ ಸೊಸೈಟಿ: ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಾನು

28-09-2025 ರಂದು ಶಾಲೆಯಲ್ಲಿ ಜರಗಿದ ಅಲೆವೂರು ಎಜ್ಯುಕೇಶನ್‌ ಸೊಸೈಟಿಯ ಸರ್ವ ಸಾಧಾರಣ ಸಭೆಯಲ್ಲಿ ನಾನು ಖಜಾಂಚಿಯ ನೆಲೆಯಲ್ಲಿ ಭಾಗವಹಿಸಿದ್ದೆ. ಅದರ ವಿವರವಾದ  ವರದಿಯನ್ನು...