ಭೋಜರಾವ್ ಕಂಪೌಂಡ್, ಗೋಪಾಲ ಮಾಸ್ಟ್ರು ಹಾಗೂ ಶಾರದಾ ಟೀಚರ್

ನಾನು ಪೂರ್ಣಪ್ರಜ್ಞ ಕಾಲೇಜಿಗೆ 1977ರಲ್ಲಿ ಬಂದು ಸೇರಿದಾಗ ಸ್ವಲ್ಪ ಸಮಯ ABMM ಹೋಸ್ಟೆಲ್‌ನಲ್ಲಿದ್ದು ನಂತರ ಹೆಚ್ಚಿನ ಅನುಕೂಲತೆಗಾಗಿ ಹೋಗಿ ಸೇರಿದ್ದು ಉಡುಪಿಯ ವಾದಿರಾಜ ಮಾರ್ಗದಲ್ಲಿದ್ದ ಭೋಜರಾವ್ ಕಂಪೌಂಡ್‌ಗೆ. ಅಲ್ಲಿನಾನು ಕಳೆದ ಮೂರು ವರ್ಷಗಳಲ್ಲಿ ನೆನಪಿನಲ್ಲಿ ಖಾಯಂ ಆಗಿ ಇರುವಂತಹ ವ್ಯಕ್ತಿ ಗೋಪಾಲ ಮಾಸ್ಟ್ರು ಹಾಗೂ ಶಾರದಾ ಟೀಚರ್ ಹಾಗೂ ಅವರ ಮಕ್ಕಳಾದ ಸುಧೀರ್ ಹಾಗೂ ಮಮತ. ಗೋಪಾಲ ಮಾಸ್ಟ್ರು ಅವರ ಮನೆ ಸಹ ಅದೇ ಜಾಗದಲ್ಲಿತ್ತು. ನಮ್ಮನ್ನು ಬಾರ್ಕೂರಿಗೆ ಬಾಸ್ಕರ ಕೋಟ್ಯಾನ್ ಮನೆಗೆ, ಬೆಣ್ಣೆಕದ್ರುಗೆ ಕರೆದುಕೊಂಡು ಹೋದದ್ದು, ಕೆಲವು ಪ್ರವಾಸಕ್ಕೆ ಕರೆದುಕೊಂಡು ಹೋದದ್ದು, ಆಗಾಗ ಮಿತ್ರಸಮಾಜ ಹೋಟೇಲಿಗೆ ಕರೆದುಕೊಂಡು ಹೋಗುತ್ತಿದ್ದುದು ಈಗಲೂ ನೆನಪಿದೆ. ನನ್ನ ಸಹಪಾಠಿಗಳಾದ ಕಾಸರಗೋಡಿನ ನಾರ್ತ್ ಮಲಬಾರ್ ಬೇಂಕಿನಲ್ಲಿ ಉನ್ನತ ಹುದ್ದೆಯಲ್ಲಿದ್ದು ಈಗ ಕುಂಬಳೆಯಲ್ಲಿ ನಿವೃತ್ತಿ ಜೀವನ ನಡೆಸುತ್ತಿರುವ ಶಿವರಾಮ ಭಟ್ ಹಾಗೂ ಸ್ಟೇಟ್ ಬೇಂಕಿನಿಂದ ಆಪೀಸರ್ ಆಗಿ ನಿವೃತ್ತಿ ಹೊಂದಿದ ಮುಳ್ಳೇರಿಯ ಸಮೀಪದ ಅಯಿಪಂಜಿಗುಳಿಯ ಹಾಗೂ ಈಗ ಮೈಸೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿರುವ ಮುರಳೀಧರ ಎ ಆರ್ - ನಾವು ಗೋಪಾಲ ಮಾಸ್ಟ್ರು ಹಾಗೂ ಟೀಚರ್ ಅವರಿಂದ ತುಂಬ ಸಹಾಯ ಸಹಕಾರಗಳನ್ನು ಪಡೆದಿದ್ದೇವು. ಯಾವುದೇ ವಿಷಯದ ಬಗೆಗೆ ಹೆಚ್ಚಿನ ವಿಷಯ ಬೇಕಾದರೆ ಅವರಿಬ್ಬರಲ್ಲಿ ವಿಚಾರಿಸಿದರೆ ಸಾಕಿತ್ತು. ಗೋಪಾಲ ಮಾಸ್ಟ್ರು ನಮ್ಮನ್ನು ಬಿಟ್ಟು ಬೇಗನ...